ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮ — ಕರ್ನಾಟಕ ಸರ್ಕಾರದ ಹೊಸ ನಿಗಮದ ನಿರ್ದೇಶಕರಾಗಿ ಶ್ರೀ. ಪ್ರಶಾಂತ್ ರಾಜ್ ಜತ್ತನ್ನ ಅವರನ್ನು ನೇಮಿಸಲಾಗಿದೆ. ಈ ನಿಗಮದ ಮೂಲಕ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ನವೀನ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶದಿಂದ, ಅವರು ರಾಜ್ಯದ ವಿವಿಧ ಎಲ್ಲಾ ಜಿಲ್ಲೆಗಳ ಕ್ರೈಸ್ತ ಧರ್ಮಗುರುಗಳು (ಪಾಸ್ಟರ್ಸ್) ಮತ್ತು ನಾಯಕರುಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಈ ಪರಿಪ್ರೇಕ್ಷೆಯಲ್ಲಿ, ದಿನಾಂಕ 25/06/2025 ರಂದು ಶ್ರೀ. ಪ್ರಶಾಂತ್ ರಾಜ್ ಜತ್ತನ್ನ ಅವರು ಧಾರವಾಡ ಪಾಸ್ಟರ್ಸ್ ಅಂಡ್ ಲೀಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ರೆವ್. ಸೆಡ್ರಿಕ್ ಜಾಕೋಬ್ ಹಾಗೂ ಇನ್ನಿತರ ಕ್ರೈಸ್ತ ಧರ್ಮಗುರುಗಳನ್ನು ಹಾಗೂ ನಾಯಕರನ್ನು ಭೇಟಿಯಾಗಿ, ನಿಗಮದ ಕಾರ್ಯತಂತ್ರಗಳ ಬಗ್ಗೆ ಸಲಹೆ ಮತ್ತು ಸುಚನೆಗಳನ್ನು ಸಂಗ್ರಹಿಸಿದರು. ಈ ಕೂಡಿಕೆಯಲ್ಲಿ ಧಾರವಾಡ ಪಾಸ್ಟರ್ಸ್ ಅಂಡ್ ಲೀಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ರೆವ್. ಸೆಡ್ರಿಕ್ ಜಾಕೋಬ್ ಅವರು ಹೊಸದಾಗಿ ನಿರ್ದೇಶಕರಾಗಿ ಆಯ್ಕೆಯಾದ ಶ್ರೀ. ಪ್ರಶಾಂತ್ ರಾಜ್ ಜತ್ತನ್ನ ಅವರಿಗೆ ಬೇಡಿಕೆಗಳನ್ನು ಪ್ರಸ್ತಾಪನೆಯನ್ನು ಮಾಡಿರುತ್ತಾರೆ. ಅದರಲ್ಲಿ ಸಭೆಗಳಿಗೆ ಹಾಗೂ ಸಭಾಪಾಲಕರಿಗೆ ಹಿತವನ್ನು ಬಯಸಿ ಅವರಿಗೆ ಬರಬೇಕಾದ ಅನುದಾನದ ವಿಷಯದಲ್ಲಿ, ಹಾಗೂ ಬೆಳವಣಿಗೆಯ ವಿಷಯದಲ್ಲಿಯೂ ಮತ್ತು ಮಕ್ಕಳ ವಿದ್ಯಾಭ್ಯಾಸದ ವಿಷಯದ ಕುರಿತು ಕ್ರೈಸ್ತ ಸಮುದಾಯದ ವತಿಯಿಂದ ಅವರಿಗೆ ಬೇಡಿಕೆಗಳನ್ನು ಪ್ರಸ್ತಾಪನೆ ಮಾಡಿರುತ್ತಾರೆ. ಇದಲ್ಲದೆ ಸಂಘದ ವತಿಯಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಉಪಸ್ಥಿತರು :
ರೇವ್. ಲೂಥರ್ ಮಹಾಡೆ , ಪಾ. ಗಿಲ್ಬರ್ಟ್, ಪಾ. ಸದಾನಂದ, ಪಾ. ಆನಂದ್, ಪಾ. ಪ್ರವೀಣ್ ನಡಕಟ್ಟಿನ್ , ಪಾ. ಸೆಲ್ವನ್ ಬಿಜಾಪುರ, ಪಾ. ಯೋಗೇಶ್ , ಪಾ . ರಘು